"ಶ್ರೀ ಪೊತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಕಾಲಜ್ಞಾನಂ"

        ಶ್ರೀ ಪೊತುಲೂರಿ ವೀರಬ್ರಹ್ಮೇಂದ್ರ ಸ್ವಾಮಿ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಹದಿನೇಳನೇ ಶತಮಾನದಲ್ಲಿ ಜೀವಿತವಾಗಿದ್ದವರು ಮತ್ತು ಪರಿಪೂರ್ಣಾಚಾರ್ಯ ಮತ್ತು ಪ್ರಕೃತಾಂಬ ದಂಪತಿಗಳಿಗೆ ಜನಿಸಿದವರು. ಸರಸ್ವತಿ ನದಿ ಹರಿಯುವ ಬ್ರಹ್ಮಂಡಪುರಂ ಗ್ರಾಮದಲ್ಲಿ ಹುಟ್ಟಿ, ವಾರಣಾಸಿಯ ಅತ್ರಿ ಮಹಾಮುನಿಯ ಆಶ್ರಮದಲ್ಲಿ ಬೆಳೆದರು. ಇದಾದ ನಂತರ, ಚಿಕ್ಕಬಳ್ಳಾಪುರದ ಪಾಪಾಗ್ನಿ ಮಠದ ಮುಖ್ಯಸ್ಥರಿಗೆ ಇವರನ್ನು ನೀಡಲಾಯಿತು. ಇವರಿಗೆ ವೀರಂ ಬೋಟ್ಲಯ್ಯ ಎಂದು ನಾಮಕರಣ ಮಾಡಲಾಯಿತು.

         ಕಾಲಜ್ಞಾನಂ ಕೃತಿಯ ಸಾಲೊಂದು, ಈಗ ಸಿಕ್ಕಾಪಟ್ಟೆ ವೈರಲ್ ಪಾಪಾಗ್ನಿ ಮಠದಲ್ಲಿ ವೀರಂ ಬೋಟ್ಲಯ್ಯ ಎಂದು ಕರೆಯಲಾಗಿದ್ದ ವೀರಬ್ರಹ್ಮೇಂದ್ರ ಸ್ವಾಮಿ 11ನೇ ವಯಸ್ಸಿನಲ್ಲಿ ಕಾಳಿಕಾಂಬ ಸಪ್ತಶತಿಯನ್ನು ಬರೆದರು. ತಮ್ಮ ಆಧ್ಯಾತ್ಮಿಕ ಪಯಣವನ್ನು ಆರಂಭಿಸಿದ ವೀರಂ ಬೋಟ್ಲಯ್ಯ ಹಲವಾರು ಕೃತಿಗಳನ್ನು ಬರೆದು ಪೊತ್ತಲೂರು ವೀರಬ್ರಹ್ಮೇಂದ್ರಸ್ವಾಮಿ ಎಂದೇ ಹೆಸರಾದರು. ಇವರು ಬರೆದ ಕಾಲಜ್ಞಾನಂ ಕೃತಿಯ ಸಾಲೊಂದು, ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

         ಈಶಾನ್ಯ ದಿಕ್ಕಿನಲ್ಲಿ ವಿಷಗಾಳಿ ಹುಟ್ಟಿತಯ್ಯಾ ಆ ತೆಲುಗು ಕೃತಿಯ ಕನ್ನಡ ಭಾಷಾಂತರ ಹೀಗಿದೆ, "ಈಶಾನ್ಯ ದಿಕ್ಕಿನಲ್ಲಿ ವಿಷಗಾಳಿ ಹುಟ್ಟಿತಯ್ಯಾ.. ಲಕ್ಷಮಂದಿ ಪ್ರಜೆಗಳು ಸತ್ತರಯ್ಯಾ.. ಕೋರಂಟಿ ಅನ್ನೋ ರೋಗ ಕೋಟಿ ಮಂದಿಗೆ ತಗುಲಿ ಕೋಳಿ ಹಾಗೆ ಕೂಗಿ ಸತ್ತರಯ್ಯಾ". ಇದು ವೀರಬ್ರಹ್ಮೇಂದ್ರಸ್ವಾಮಿಯ ಕಾಲಜ್ಞಾನಂ ಕೃತಿಯ ಅನುವಾದ.

         ಚೀನಾ ದೇಶ, ಭಾರತಕ್ಕೆ ಈಶಾನ್ಯ ದಿಕ್ಕಿನಲ್ಲಿ, ಅದಕ್ಕೇ ಕೊರೊನಾ ಹೋಲಿಕೆ ಚೀನಾ ದೇಶ, ಭಾರತಕ್ಕೆ ಈಶಾನ್ಯ ದಿಕ್ಕಿನಲ್ಲಿ ಇರುವುದರಿಂದ, ಈಗಿನ ಕೊರೊನಾ ಕಾಯಿಲೆಯನ್ನು ತಪಸ್ವಿ ಬರೆದ ಕಾಲಜ್ಞಾನಂ ಕೃತಿಯ ಸಾಲಿಗೆ ಹೋಲಿಕೆ ಮಾಡಲಾಗುತ್ತಿದೆ. ಸುಮಾರು ಮುನ್ನೂರು ವರ್ಷಕ್ಕೆ ಮುನ್ನವೇ, ವೀರಬ್ರಹ್ಮೇಂದ್ರಸ್ವಾಮಿ ತಮ್ಮ ಕಾಲಜ್ಞಾನದಲ್ಲಿ ಉಲ್ಲೇಖ ಮಾಡಿದ್ದಾರೆಂದು ಮಾತನಾಡಲಾಗುತ್ತಿದೆ.

Comments

  • By A Name

    This is an example of a comment made on a post. You can either edit the comment, delete the comment or reply to the comment. Use this as a place to respond to the post or to share what you are thinking.